ಮಾತಿನ ಮನೆಗೆ ಅಪ್ಪು-ಪಪ್ಪು
Posted date: 28/April/2010

ಸೌಂದರ್ಯ ಜಗದೀಶ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ೨ನೇ ಚಿತ್ರ ಅಪ್ಪು-ಪಪ್ಪು ಹಾಲಿವುಡ್ ಶೈಲಿಯಲ್ಲಿ ಈ ಚಿತ್ರವನ್ನು ತಯಾರಿಸಲಾಗುತ್ತಿದ್ದು, ನಿರ್ಮಾಪಕ ಜಗದೀಶ್‌ರ ಪುತ್ರ ಮಾಸ್ಟರ್ ಸ್ನೇಹಿತ್ ಹಾಗೂ ಕಾಂಬೋಡಿಯಾದ ಓರಂಗಟಾನ್ ಎಂಬ ಚಿಂಪಾಂಜಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮಗುವಿನೊಂದಿಗೆ ಚಿಂಪಾಂಜಿ ನಡೆಸುವ ಅದ್ಭುತ ಚಮತ್ಕಾರಗಳನ್ನು ಈ ಚಿತ್ರದಲ್ಲಿ ಕಾಣಬಹುದಾಗಿದ್ದು, ಈಗಾಗಲೇ ಕಾಂಬೋಡಿಯಾ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಕಳೆದ ೨೨ರಿಂದ ಕರಿಸುಬ್ಬು ಸ್ಟುಡಿಯೋದಲ್ಲಿ ಮಾತುಗಳ ಮರುಲೇಪನ ಕಾರ್ಯ ಪ್ರಾರಂಭವಾಗಿದೆ. ಆರ್. ಅನಂತರಾಜು ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು, ವಿಜಯ್ ಕಿರಣ್ ಹಾಗೂ ಸೌಂದರ್ಯ ಜಗದೀಶ್ ನಿರ್ಮಾಪಕರಾಗಿದ್ದಾರೆ. ಎಸ್.ಕೃಷ್ಣರ ಛಾಯಾಗ್ರಹಣ, ಹಂಸಲೇಖರ ಸಂಗೀತ ಹಾಗೂ ರಾಮ್‌ನಾರಾಯಣ್‌ರ ಸಾಹಿತ್ಯ ಇದ್ದು, ಅಬ್ಬಾಸ್, ರೇಖಾ, ರಂಗಾಯಣ ರಘು, ಜೆನಿಫರ್, ಕೋಮಲ್ ಪ್ರಮುಖ ಪಾತ್ರದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed